Wednesday, October 13, 2010

ನಿನಗಾಗಿ.....

ಗುರುತು

ಜೊತೆಯಾಗಿ ಕಟ್ಟಿದ
ಕನಸಿನ ಗೋಪುರವ
ಸುಳಿವು ನೀಡದೇ
ಕೆಡವಿ ಹೋದ ಗೆಳೆಯಾ ......
ಕಳೆದ ಕ್ಷಣದ ಹೆಜ್ಜೆಗುರುತಾ
ಅಳಿಸಲಾಗದೆ ಹೋದೆಯಾ ......

Thursday, July 8, 2010

ಸೆಲೆ

ನೀ ನಕ್ಕಾಗಲೇ
ಶವವಾಗಿದ್ದ
ಕನಸು ಎದ್ದು
ಕೂತವು

Sunday, July 4, 2010

ನಿರ್ಗಮನ

ಗೆಳೆಯ ,
ನಿನ್ನ ನಿರ್ಗಮನ
ಅಳು ನುಂಗಿ ನಗುವುದ
ಕಲಿಸಿತು

Sunday, April 25, 2010

ಬದುಕು

ಪ್ರತಿ ಕ್ಷಣ
ಹೊಸ ಹೊಸ
ಪಾಠ ಕಲಿಸುವ
ಶಿಕ್ಷಕ

Tuesday, February 16, 2010

ಪ್ರೀತಿ

ಎರಡು ಹ್ರದಯಗಳ
ಕನಸಿನ ತೇರಲಿ
ಹೊರಟ
ಮೆರವಣಿಗೆ

Wednesday, February 10, 2010

ವರದಕ್ಷಿಣೆ

ಹೆಮ್ಮಕ್ಕಳ ಬಾಳಲಿ
ಕರಾಳ ಹಸ್ತ ಚಾಚಿ
ಇಂಚಿಚು ಕೊಲ್ಲುವ
ದಾನವ